ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿ ದಾಳಿ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು: ಪೇಜಾವರ ಶ್ರೀ
ಉಡುಪಿ: ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿ ದಾಳಿ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಯಾವುದೇ ಯುದ್ಧಕ್ಕೆ ಎಡೆಮಾಡಿಕೊಡಬಾರದು. ಸರ್ಜಿಕಲ್ ಸ್ಡ್ರೈಕ್ ಮಾಡಿದರೂ ಉತ್ತಮ. ಯುದ್ಧ ನಡೆದರೆ ಎರಡು ದೇಶಗಳ ಅಮಾಯಕ ಜನರು ಹಾಗೂ ಯೋಧರು ಬಲಿಯಾಗುತ್ತಾರೆ. ಉಗ್ರರಿಗೆ ಶಾಕ್ ಕೊಡಲು ಪ್ರಧಾನಿ ತೀರ್ಮಾನ ಕೈಗೊಳ್ಳಬೇಕು. ರಾಮಮಂದಿರ ನಿರ್ಮಾಣ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದ ಹಿರಿಯ ಮುಖಂಡರು ನಾಲ್ಕು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಚುನಾವಣಾ ಸಮಯವಾಗಿರುವುದರಿಂದ ರಾಮಮಂದಿರ ವಿಷಯ ಎತ್ತಿದರೆ ತಪ್ಪಾಗಬಹುದು. ಹಾಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ. […]