ಉಡುಪಿಯ ಖ್ಯಾತ ವೈದ್ಯ ಡಾ. ರಾಮ ದೇವಾಡಿಗ ಅವರ ಆರೋಗ್ಯ ಸ್ಥಿರವಾಗಿದೆ: ಚಿಕಿತ್ಸೆಗೆ ಸ್ಪಂದನೆ
ಉಡುಪಿ: ನಗರದ ಹೆಸರಾಂತ ವೈದ್ಯ ಡಾ ರಾಮ ದೇವಾಡಿಗ ಅವರು ಆರೋಗ್ಯವಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ತಪ್ಪು ಮಾಹಿತಿಯಿಂದ ನಮ್ಮ ವೆಬ್ ಸೈಟ್ ನಲ್ಲಿ ತಪ್ಪಾಗಿ ಸುದ್ದಿ ಪ್ರಕಟಗೊಂಡಿದ್ದು, ಇದಕ್ಕೆ ಸಂಸ್ಥೆಯು ಕ್ಷಮೆಯಾಚಿಸುತ್ತದೆ. ವದಂತಿಗಳಿಗೆ ಕಿವಿಗೊಡ ಬೇಡಿ. ರಾಮ ದೇವಾಡಿಗ ಅವರ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ, ಅವರು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸೋಣ..