ಉಡುಪಿ: ರಾಮ್ ಸೇನಾ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಉಡುಪಿ: ವಾಹನದ ಇನ್ಸೂರೆನ್ಸ್ ನೆಪದಲ್ಲಿ ರಾಮ್ ಸೇನಾ ಕಾರ್ಯಕರ್ತನೋರ್ವನನ್ನು ಉಡುಪಿಯ ರಾಜಾಂಗಣಕ್ಕೆ ಕರೆಸಿಕೊಂಡ ದುಷ್ಕರ್ಮಿಗಳು, ಆತನ ಮೇಲೆ ಏಕಾಏಕಿಯಾಗಿ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ರಾಮ್ ಸೇನಾ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ನಮ್ಮ ಕಾರ್ಯಕರ್ತನ ಮೇಲಿನ ಹಲ್ಲೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಉಡುಪಿ, ದ. ಕ ಜಿಲ್ಲೆಯಾದ್ಯಂತ ರಾಮ್ ಸೇನಾ ಕಾರ್ಯಕರ್ತರು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಏಚ್ಚರಿಕೆ ನೀಡಿದ್ದಾರೆ.