ಮಲ್ಪೆ: ಜಿ.ಎಸ್.ಬಿ ಸಮಾಜದ ರಾಮಮಂದಿರದಲ್ಲಿ ಲಕ್ಷ ತುಳಸಿ ಅರ್ಚನೆ
ಮಲ್ಪೆ ಜಿ.ಎಸ್.ಬಿ ಸಮಾಜದ ರಾಮಮಂದಿರದಲ್ಲಿ ಆಷಾಢ ಏಕಾದಶೀ ಅಂಗವಾಗಿ ಆದಿತ್ಯವಾರ ಜಿ.ಎಸ್. ಬಿ ಯುವಕ ಮಂಡಳಿ ಆಶ್ರಯದಲ್ಲಿಅರ್ಚಕ ವಿಘ್ನೇಶ ಭಟ್, ಲಕ್ಷ್ಮಣ ಭಟ್ ಕಲ್ಯಾಣಪುರ ಇವರ ಮಾರ್ಗದರ್ಶನದಲ್ಲಿ ದೇವರಿಗೆ ಲಕ್ಷ ತುಳಸಿ ಅರ್ಚನೆ ಜರಗಿತು , ಶ್ರೀ ದೇವರ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ನೂರಾರು ಸಮಾಜ ಬಂಧುಗಳು ಉಪಸ್ಥಿತರಿದ್ದರು.