ರಾಮ ಮಂದಿರದಲ್ಲಿ ಬಿಲ್ಲು ಬಾಣದಿಂದ ಶಸ್ತ್ರಸಜ್ಜಿತ ಬಾಲರಾಮ: ಅರುಣ್ ಯೋಗಿರಾಜ್ ಹೆಗಲಿಗೆ ವಿಗ್ರಹ ನಿರ್ಮಾಣ ಕಾರ್ಯ
ಅಯೋಧ್ಯಾ: ರಾಮಮಂದಿರದ ನಿರ್ಮಾಣದ 60 ಪ್ರತಿಶತದಷ್ಟು ಪೂರ್ಣಗೊಂಡಿದ್ದು 2024 ರಲ್ಲಿ ಜನವರಿಯಲ್ಲಿ ರಾಮನು ದೇವಾಲಯದ ಮೂಲ ಗರ್ಭಗುಡಿಯನ್ನು ಸೇರಲಿದ್ದಾನೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಲಿರುವ ಬಿಲ್ಲು ಬಾಣದಿಂದ ಶಸ್ತ್ರಸಜ್ಜಿತವಾದ ಐದು ವರ್ಷದ ಬಾಲರಾಮನ ವಿಗ್ರಹವು ಗರ್ಭಗುಡಿಯಲ್ಲಿ ಸ್ಥಳವನ್ನು ಪಡೆಯಲಿದೆ ಎಂದು ಅಯೋಧ್ಯೆಯ ವರದಿಗಳು ತಿಳಿಸಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಯೋಧ್ಯೆಯ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನಿನ್ನೆ ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅರುಣ್ […]