ತನ್ನ 30 ವರ್ಷಗಳ ಪ್ರತಿಜ್ಞೆ ಪೂರ್ಣಗೊಳಿಸಿದ ಪ್ರಧಾನಿ ಮೋದಿ: ಇದೇ ಮೊದಲ ಬಾರಿಗೆ ಅಯೋಧ್ಯೆಯ ಲಕ್ಷದೀಪೋತ್ಸವದಲ್ಲಿ ಭಾಗಿ

ಅಯೋಧ್ಯಾ: 1990 ಸೆಪ್ಟೆಂಬರ್ 25 ರಂದು ಸೋಮನಾಥ-ಅಯೋಧ್ಯೆ ರಾಮ ರಥಯಾತ್ರೆ ಪ್ರಾರಂಭವಾಯಿತು. ಆಗ ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ ಅವರು ಗುಜರಾತ್ ನಿಂದ ಹೊರಡುವ ಯಾತ್ರೆಯ ಸಾರಥಿಯಾಗಿದ್ದರು. ಈ ಏಕತಾ ಯಾತ್ರೆಯು ಕಾಶ್ಮೀರದ ಲಾಲ್ ಚೌಕ್‌ನಲ್ಲಿ 26 ಜನವರಿ 1992 ರಂದು ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಮುಕ್ತಾಯಗೊಂಡಿತು. ಇದಕ್ಕೂ ಕೆಲ ದಿನಗಳ ಮುನ್ನ ಜನವರಿ 14 ರಂದು, ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಭಗವಾನ್ ಶ್ರೀರಾಮನ ಆಶೀರ್ವಾದವನ್ನು ಕೋರಿದ ಬಳಿಕ ಮೋದಿಯವರು […]