ಕರಾವಳಿಯುದ್ದಕ್ಕೂ ಸಾಗಲಿದೆ ಜಿಲ್ಲೆಯ ಪ್ರಗತಿ-ಸಂಸ್ಕೃತಿಯನ್ನು ಬಿಂಬಿಸುವ ರಜತರಥ: ರಘುಪತಿ ಭಟ್

ಉಡುಪಿ: ಉಡುಪಿ ಜಿಲ್ಲೆಯ ರಜತ ಉತ್ಸವದ ಅಂಗವಾಗಿ ಜಿಲ್ಲೆಯನ್ನು ಮುಂದಿನ 25 ವರ್ಷಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಮಗ್ರವಾಗಿ ಅಭಿವೃದ್ದಿಪಡಿಸುವ ಬಗ್ಗೆ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ, ದಿಕ್ಸೂಚಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿವಿಧ ಕ್ಷೇತ್ರಗಳ ತಜ್ಞರು ನೀಡಿರುವ ಸಲಹೆಗಳನ್ನು ದಾಖಲೀಕರಣ ಮಾಡಿ, ಅದರಂತೆ ಜಿಲ್ಲೆಯನ್ನು ಅಭಿವೃದ್ದಿಗೊಳಿಸಲಾಗುವುದು. ರಜತ ಉತ್ಸವ ಅಂಗವಾಗಿ ಜಿಲ್ಲೆಯ ಪ್ರಗತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ರಥವನ್ನು ಸಿದ್ದಪಡಿಸಲಾಗಿದ್ದು, ಕರಾವಳಿಯ ಎಲ್ಲಾ ಕಡೆಗಳಲ್ಲಿ ಸಂಚರಿಸುವ ಈ ರಥವು ಜಿಲ್ಲೆಯ ಪ್ರಗತಿಯನ್ನು ಎಲ್ಲೆಡೆ ಸಾರಲಿದೆ ಎಂದು ಶಾಸಕ […]