ಕರಾವಳಿಗೆ ಮತ್ತೆ ಮರುಕಳಿಸಿದ ವರುಣ: ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಉಡುಪಿ/ಮಂಗಳೂರು: ವಾರಾಂತ್ಯದಲ್ಲಿ ದಕ್ಷಿಣ ಭಾರತದಲ್ಲಿ ಕಾಣಿಸಿಕೊಂಡ ವರುಣ ಕೃಪೆಯು ಈ ವಾರವೂ ಮುಂದುವರಿಯುವ ಸಾಧ್ಯತೆಯಿದೆ ಮತ್ತು ಈ ಆರ್ದ್ರ ಪರಿಸ್ಥಿತಿಗಳು ಕನಿಷ್ಠ ಶುಕ್ರವಾರದವರೆಗೆ ಉಳಿಯಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಗುರುವಾರ ಮತ್ತು ಶುಕ್ರವಾರದಂದು ದಕ್ಷಿಣ ಆಂತರಿಕ ಕರ್ನಾಟಕದಲ್ಲಿ 64.5 ಮಿಮೀ ನಿಂದ115.5 ಮಿಮೀ ವರೆಗೆ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 20 ಮತ್ತು 21 ರಂದು ಕರಾವಳಿ ಕರ್ನಾಟಕದಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. […]