ಸ್ಪೋಟಕಗಳನ್ನಿಟ್ಟು ಉದಯಪುರ-ಅಹಮದಾಬಾದ್ ರೈಲ್ವೆ ಹಳಿ ಘಾಸಿ ಪ್ರಕರಣ: ಭಯೋತ್ಪಾದಕ ಕೃತ್ಯದ ಅನುಮಾನ
ಉದಯಪುರ: ಅಕ್ಟೋಬರ್ 31 ರಂದು ಅಸರ್ವ ರೈಲು ನಿಲ್ದಾಣದಿಂದ ಉದಯಪುರ-ಅಹಮದಾಬಾದ್ ರೈಲ್ವೆ ಹಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು, ಈ ಹಳಿಯಲ್ಲಿ ಸ್ಪೋಟಕಗಳನ್ನಿರಿಸಿ ರೈಲ್ವೆ ಹಳಿಯನ್ನು ಘಾಸಿಗೊಳಿಸಿ ರೈಲು ಅಪಘಾತ ನಡೆಸಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾಣಾಪಾಯ ಮಾಡುವ ಸಂಚು ನಡೆಸಿದ್ದು, ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಉದಯಪುರ ಮತ್ತು ಅಹಮದಾಬಾದ್ ನಡುವೆ ಹೊಸದಾಗಿ ತೆರೆಯಲಾದ ರೈಲು ಮಾರ್ಗದಲ್ಲಿ “ಡಿಟೋನೇಟರ್” ಬಳಸಿ ಸ್ಫೋಟ ನಡೆಸಿದ್ದರಿಂದ ರೈಲ್ವೆ ಟ್ರ್ಯಾಕ್‌ನಲ್ಲಿ ಬಿರುಕುಗಳು ಕಂಡುಬಂದಿದ್ದವು. ಇದು ಉದ್ದೇಶಪೂರ್ವಕವಾಗಿ […]