ನೇತ್ರಾವತಿ ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳ್ಳತನ: ನಾಲ್ಕು ಗಂಟೆಯೊಳಗಾಗಿ ಕಳ್ಳನ ಪತ್ತೆ ಹಚ್ಚಿದ ಪೊಲೀಸರು

ಉಡುಪಿ: ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ ಕದ್ದು ಪರಾರಿಯಾಗಿದ್ದ ಕಳ್ಳನನ್ನು ರೈಲ್ವೆ ಪೊಲೀಸರು ದೂರು ದಾಖಲಿಸ್ದ ನಾಲ್ಕು ಗಂಟೆಗಳೊಳಗಾಗಿ ಬಂಧಿಸಿದ್ದಾರೆ. ದಿಲ್ಲಿ ನಿವಾಸಿ ಸನ್ನಿ ಮಲ್ಹೋತ್ರಾ (30) ಬಂಧಿತ ಆರೋಪಿಯಾಗಿದ್ದಾನೆ. ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣಿ ಬಾಲಕೃಷ್ಣನ್ ಎಂಬ ಮಹಿಳೆ ಬುಧವಾರ S7 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬ್ಯಾಗ್‌ ತೋಕೂರು ನಿಲ್ದಾಣದ ಬಳಿ ಕಳ್ಳತನವಾಗಿತ್ತು. ಬ್ಯಾಗಿನಲ್ಲಿ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳಿದ್ದವು. ಈ ಕುರಿತು ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಪ್ರಾರಂಭಿಸಿದ […]