ಉದ್ಯೋಗ ನೇಮಕಾತಿಯಲ್ಲಿ ಅಗ್ನಿವೀರ್‌ಗಳಿಗಾಗಿ ಹಲವು ಸಡಿಲಿಕೆ ನೀಡಿದ ರೈಲ್ವೆ ಇಲಾಖೆ
ನವದೆಹಲಿ: ನಾಲ್ಕು ವರ್ಷಗಳ ರಕ್ಷಣಾ ಸೇವೆಯನ್ನು ಪೂರ್ಣಗೊಳಿಸಿದ ಅಗ್ನಿವೀರ್‌ಗಳಿಗೆ ರೈಲ್ವೇ ನೇಮಕಾತಿಯಲ್ಲಿ ಹಲವಾರು ಸಡಿಲಿಕೆಗಳನ್ನು ನೀಡಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ. ಅಗ್ನಿವೀರರಿಗೆ ರೈಲ್ವೇಯಲ್ಲಿನ ನೇರ ನೇಮಕಾತಿ ಕೋಟಾದ ವಿರುದ್ಧ ಲೆವೆಲ್ -1 ರಲ್ಲಿ ಶೇಕಡಾ ಹತ್ತರಷ್ಟು ಮತ್ತು ಲೆವೆಲ್ – 2 ಮತ್ತು ಮೇಲಿನ ನಾನ್ ಗೆಜೆಟೆಡ್ ಹುದ್ದೆಗಳಲ್ಲಿ ಐದು ಶೇಕಡಾ ಮೀಸಲಾತಿಯನ್ನು ಒದಗಿಸಲಾಗುವುದು. ಮಾತ್ರವಲ್ಲದೆ, ದೈಹಿಕ ದಕ್ಷತೆಯ ಪರೀಕ್ಷೆಯು ಅನ್ವಯವಾಗುವಲ್ಲೆಲ್ಲಾಅಗ್ನಿವೀರ್‌ಗಳಿಗೆ ಇದರಿಂದ ವಿನಾಯಿತಿಯನ್ನು ನೀಡಲಾಗುವುದು. ವಿವಿಧ ಸಮುದಾಯಗಳಿಗೆ ಈಗಾಗಲೇ ನಿಗದಿಪಡಿಸಿದ ಅಸ್ತಿತ್ವದಲ್ಲಿರುವ ವಯಸ್ಸಿನ ಮಿತಿಗಿಂತ ಹೆಚ್ಚುವರಿಯಾಗಿ […]