14 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಿ ವೈಷ್ಣೋದೇವಿಯ ದರ್ಶನ ಪಡೆದ ರಾಹುಲ್ ಗಾಂಧಿ
ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲಿ ಸಾಗಿ ಜಮ್ಮುವಿನ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟದಲ್ಲಿರುವ ವೈಷ್ಣೋದೇವಿಯ ದರ್ಶನ ಪಡೆದಿದ್ದಾರೆ. ಜಮ್ಮುವಿನ ಕಾತ್ರಾದಿಂದ 14 ಕಿ.ಮೀ ದೂರದಲ್ಲಿರುವ ವೈಷ್ಣೋದೇವಿ ಗುಹೆಗೆ ಕಾಲ್ನಡಿಗೆಯಲ್ಲಿ ಸಾಗಿದ ರಾಹುಲ್ ಗಾಂಧಿ ಶುಕ್ರವಾರ ದೇವಿಯ ದರ್ಶನ ಪಡೆದರು. ಯಾತ್ರಾರ್ಥಿಗಳು, ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಭದ್ರತಾ ಸಿಬ್ಬಂದಿ ರಾಹುಲ್ ಅವರಿಗೆ ಸಾಥ್ ನೀಡಿದರು.