ಭಾರತಕ್ಕೆ ಬಂದಿಳಿದ ರಫೇಲ್ ಯುದ್ದ ವಿಮಾನ: ಸೇನಾ ಬತ್ತಳಿಕೆಗೆ ಸೇರಿತು ಬಲಿಷ್ಟ ಫೈಟರ್ ಜೆಟ್

ನವದೆಹಲಿ: ಬಹು ನಿರೀಕ್ಷಿತ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನಗಳು ಬುಧವಾರ ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಬೆಳಗ್ಗೆ 11.44ರ ಹೊತ್ತಿನಲ್ಲಿ ಮತ್ತೆ ಟೇಕ್ ಆಫ್ ಯುದ್ಧ ವಿಮಾನಗಳು ಭಾರತದತ್ತ ಪಯಾಣ ಬೆಳೆಸಿದ್ದು, ಅನಂತರ ಹರ್ಯಾಣ ಅಂಬಾಲಾ ಏರ್ ಬೇಸ್ ಗೆ ಬಂದಿಳಿದಿವೆ. ಫ್ರೆಂಚ್ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್ ಕಾರ್ಖಾನೆ ನಿರ್ಮಿಸಿದ ರಫೆಲ್ ಫೈಟರ್ ಜೆಟ್‌ಗಳು ದಕ್ಷಿಣ ಫ್ರಾನ್ಸ್‌ನ ಬೋರ್ಡಾಕ್ಸ್ ನಗರದ ಮೆರಿಗ್ನಾಕ್ ವಾಯು ನೆಲೆಯಿಂದ ಜು. 27ರಂದು ಭಾರತದತ್ತ ಮುಖ ಮಾಡಿದ್ದವು. ಅನಂತರ […]
ಕೆಲವೇ ಕ್ಷಣಗಳಲ್ಲಿ ರಫೇಲ್ ಯುದ್ದ ವಿಮಾನಗಳ ಆಗಮನ ವಾಯುನೆಲೆಯಲ್ಲಿ ಸರ್ವ ಸಿದ್ಧತೆ

ಹರಿಯಾಣ: ಇಂದು ಮಧ್ಯಾಹ್ನ ಫ್ರಾನ್ಸ್‌ನಿಂದ ಹೊರಟಿರುವ ಮೊದಲ ಹಂತದ ಐದು ರಫೇಲ್ ಯುದ್ಧ ವಿಮಾನಗಳು ಅಂಬಾಲ ವಾಯುನೆಲೆಗೆ ಬಂದಿಳಿಯಲಿದೆ. ಇದನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಬರಮಾಡಿಕೊಳ್ಳಲಿದ್ದಾರೆ. ಹತ್ತಿರದ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ವಾಯುನೆಲೆ ಸುತ್ತ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಹಾಗೂ ಯುದ್ಧ ವಿಮಾನಗಳು ಇಳಿಯುವ ದೃಶ್ಯ ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿದೆ.