FIDE ಚೆಸ್ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಆರ್. ಪ್ರಗ್ನಾನಂದ: ಮ್ಯಾಗ್ನಸ್ ಕಾರ್ಲ್‌ಸೆನ್ ಗೆ ವಿಶ್ವ ಕಪ್ ಕಿರೀಟ
ಬಾಕು: ಅಜರ್ಬೈಜಾನ್ ನಲ್ಲಿ ನಡೆದ FIDE ಚೆಸ್ ವಿಶ್ವಕಪ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರ ಕನಸಿನ ಓಟಕ್ಕೆ ವಿಶ್ವ ನಂ. 1 ಮ್ಯಾಗ್ನಸ್ ಕಾರ್ಲ್‌ಸೆನ್ ಕೊನೆ ಹಾಡಿದ್ದಾರೆ. ಫೈನಲ್ ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಬಳಿಕ ಗುರುವಾರ ನಡೆದ ಟೈ-ಬ್ರೇಕ್‌ನಲ್ಲಿ 1.5-0.5 ರಿಂದ ಪ್ರಗ್ನಾನಂದನನ್ನು ಸೋಲಿಸಿ ವಿಶ್ವಕಪ್ ಪಟ್ಟ ತನ್ನದಾಗಿಸಿಕೊಂಡಿದ್ದಾರೆ. ಆದಾಗ್ಯೂ, 18 ವರ್ಷದ ಪ್ರಗ್ನಾನಂದ ರನ್ನರ್ ಅಪ್ ಸ್ಥಾನವನ್ನು ಗಳಿಸಿ ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆರ್. ಪ್ರಗ್ನಾನಂದ ಅವರ ಈ ಸಾಧನೆಗೆ ಪ್ರಧಾನಿ ಮೋದಿ […]