ಸಿಂಗಾಪುರ ಓಪನ್: ಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು
ಭಾರತದ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು 21-15, 21-7 ಸೆಟ್‌ಗಳಿಂದ ಜಪಾನಿನ ಶಟ್ಲರ್ ಸೈನಾ ಕವಾಕಮಿ ವಿರುದ್ಧ ನೇರ ಗೆಲುವು ಸಾಧಿಸುವ ಮೂಲಕ ಸಿಂಗಾಪುರ ಓಪನ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕೇವಲ ಅರ್ಧಗಂಟೆಯಲ್ಲಿ ಮುಗಿದ ಪಂದ್ಯದಲ್ಲಿ ಸಿಂಧು ತಮ್ಮ ಎದುರಾಳಿಯನ್ನು ಸೋಲಿಸಿದ್ದಾರೆ ಪಂದ್ಯಾವಳಿಯಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿ ಸಿಂಧು ಭಾಗವಹಿಸಿದ್ದಾರೆ.