ಪುಷ್ಪಾ ದ ರೂಲ್ ಗೆ ಜೈ ಎಂದ ವಿಜಯ್ ಸೇತುಪತಿ? ಪುಷ್ಪಾ ಭಾಗ-2ರಲ್ಲಿ ಖಳನಾಯಕನಾಗಿ ಮಿಂಚಲಿರುವ ವೇಧ!

ಪುಷ್ಪಾ ಭಾಗ-2, ಪುಷ್ಪಾ ದ ರೂಲ್ ನಲ್ಲಿ ವಿಕ್ರಮ್ ವೇಧ ಖ್ಯಾತಿಯ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಸೇತುಪತಿ ಮುಖ್ಯ ಖಳನಾಯಕನಾಗಿ ನಟಿಸಲಿದ್ದಾರೆ ಹಾಗೂ ಫಹಾದ್ ಫಾಸಿಲ್ ಪೋಲೀಸ್ ಪಾತ್ರದಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಸರಿಯಾಗಿದ್ದರೆ ವಿಜಯ್ ಪುಷ್ಪಾ-1 ರಲ್ಲಿ ಅರಣ್ಯಾಧಿಕಾರಿಯ ಪ್ರಾತ್ರವನ್ನು ಮಾಡಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅವರು ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಪುಷ್ಪ ಭಾಗ ಎರಡಲ್ಲಿ ವಿಜಯ್ ನಟಿಸುವ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲವಾದರೂ, ಈ ಸುದ್ದಿಯು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ.