ಭೂ ಒಡೆತನ ಯೋಜನೆಯಡಿ ಜಮೀನು ಖರೀದಿ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ಅಧೀನಕ್ಕೊಳಪಟ್ಟಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದ್ದು, ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಘಟಕ ವೆಚ್ಚ 15 ಲಕ್ಷ ರೂ. ಗಳಲ್ಲಿ ಲಭ್ಯವಾಗುವಷ್ಟು ಖುಷ್ಕಿ ಅಥವಾ ತರಿ ಅಥವಾ ಭಾಗಾಯ್ತು ಜಮೀನನ್ನು ಖರೀದಿಸಿಕೊಡಲಾಗುವುದು. ಖರೀದಿಸಲು ಉದ್ದೇಶಿಸಿರುವ ಜಮೀನು ಕೃಷಿಗೆ ಯೋಗ್ಯವಾಗಿರಬೇಕು. ಹಾಲಿ ವ್ಯವಸಾಯಕ್ಕೆ ಒಳಪಟ್ಟಿರುವ ಜಮೀನಾಗಿರಬೇಕು. ಪಿ.ಟಿ.ಸಿ.ಎಲ್. ಕಾಯ್ದೆ, ಭೂ ಸುಧಾರಣೆ ಕಾಯ್ದೆ, […]