ಕುಂದಾಪುರ: ಪೊದೆಯಲ್ಲಿ ಎಸೆದುಹೋಗಿದ್ದ ನವಜಾತ ಶಿಶುವಿನ ರಕ್ಷಣೆ

ಕುಂದಾಪುರ: ಕಾಡು ಪೊದೆಯಲ್ಲಿ ನವಜಾತ ಶಿಶುವೊಂದನ್ನು ಎಸೆದುಹೋದ ಘಟನೆ ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ಸೇತುವೆ ಬಳಿಯ ಕಾಡಿನಲ್ಲಿ  ನಡೆದಿದೆ. ಡೇರಿಗೆ ಹಾಲು ಕೊಡಲು ಹೋಗುತ್ತಿದ್ದ ಮಹಿಳೆ ಮಗುವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಚ್ಚಟ್ಟು ಗ್ರಾಮದ ಮಡಿವಾಳಕಟ್ಟು ನಿವಾಸಿ ಗೀತಾ ಅವರು ಬುಧವಾರ ಸಂಜೆ ಸುಮಾರು 4.30ಕ್ಕೆ ಸುಮಾರಿಗೆ ಡೇರಿಗೆ ಹಾಲು ಕೊಡಲು ಹೋಗುತ್ತಿದ್ದರು. ಈ ವೇಳೆ ಅವರಿಗೆ ಮಚ್ಚಟ್ಟು ಗ್ರಾಮದ ಸೇತುವೆ ಬಳಿ ರಸ್ತೆಯ ಬದಿಯ ಕಾಡು ಪೊದೆಯಲ್ಲಿ ಮಗು ಅಳುವ ಶಬ್ದ ಕೇಳಿಸಿದೆ. […]