ಆಸ್ತಿ ವಿವಾದ: ತಾಯಿ, ಮಗಳು ಕೆರೆಗೆ ಜಿಗಿದು ಆತ್ಮಹತ್ಯೆ
ಕೋಲಾರ: ಆಸ್ತಿ ವಿಚಾರ ಹಾಗೂ ಸಾಲಗಾರರ ಕಾಟಕ್ಕೆ ಬೇಸತ್ತು ತಾಯಿ ಮತ್ತು ಮಗಳು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ನರಸಾಪುರ ಎಂಬಲ್ಲಿ ನಡೆದಿದೆ. ಬೆಂಗಳೂರಿನ ಹೊರಮಾವು ಮೂಲದ ತಾಯಿ ನಂದಿತಾ (45) ಮತ್ತು ಪುತ್ರಿ ಪ್ರಗತಿ (21) ಮೃತ ದುರ್ದೈವಿಗಳು. ನಂದಿತಾ ಅವರ ಪತಿ ಮೂರು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ಗಂಡನ ಮನೆಯವರಿಂದ ಆಸ್ತಿ ವಿಚಾರವಾಗಿ ಕಿರುಕುಳಕ್ಕೆ ಹಾಗೂ ಸಾಲಗಾರರ ಕಾಟಕ್ಕೆ ಬೇಸತ್ತು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.