ಪೇಜಾವರ ಶ್ರೀಗಳು ಬಯಸಿದ್ದ ಗಾನ ಗಾರುಡಿಗನ ಕಾರ್ಯಕ್ರಮ ಕೊನೆಗೂ ಈಡೇರಲಿಲ್ಲ!

ಉಡುಪಿ: ಖ್ಯಾತ ಗಾಯಕ ಎಸ್.ಬಿ. ಬಾಲಸುಬ್ರಹ್ಮಣ್ಯ ಅವರಿಗೂ ಉಡುಪಿ ಶ್ರೀಕೃಷ್ಣಮಠಕ್ಕೂ ಅವಿನಾಭಾವ ಸಂಬಂಧವಿದೆ. ಅವರು 1972ರಿಂದ 2016ರ ವರೆಗೆ ಕೃಷ್ಣಮಠಕ್ಕೆ ಆಗಾಗ ಭೇಟಿ ನೀಡಿರುವುದೇ ಇದಕ್ಕೆ ಸಾಕ್ಷಿ. 1972 ಹಾಗೂ 1996 ರಲ್ಲಿ ಬೋರ್ಡ್ ಹೈಸ್ಕೂಲ್ ನಲ್ಲಿ ಎಸ್ ಪಿಬಿ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅಲ್ಲದೆ, 2004-06ರಲ್ಲಿ ಶ್ರೀ ಅದಮಾರು ವಿಶ್ವಪ್ರಿಯತೀರ್ಥರ ದ್ವಿತೀಯ ಪರ್ಯಾಯದ ಅವಧಿಯಲ್ಲಿ ಹಂಸಲೇಖ ನೇತೃತ್ವದಲ್ಲಿ ರಾಜಾಂಗಣದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಪೇಜಾವರ ಶ್ರೀಗಳ ಆಶೀರ್ವಾದ ಪಡೆದಿದ್ದ ಎಸ್ ಪಿಬಿ: 2016ರ […]