ಕಲಾವಿದ ಪ್ರೊ. ಎಂ. ಎಲ್. ಸಾಮಗ ಅವರಿಗೆ ಯಕ್ಷದ್ರುವ ಪಟ್ಲ ಪ್ರಶಸ್ತಿ
ಮಂಗಳೂರು: ಮೇ 28 ರಂದು ಮಂಗಳೂರಿನಲ್ಲಿ ಜರಗಿದ ‘ಯಕ್ಷದ್ರುವ ಪಟ್ಲ ಸಂಭ್ರಮ – 2023’ರಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ಕಲಾವಿದ ಪ್ರೊ. ಎಂ. ಎಲ್. ಸಾಮಗ ಅವರಿಗೆ ‘ಯಕ್ಷದ್ರುವ ಪಟ್ಲ ಪ್ರಶಸ್ತಿ – 2023’ ನೀಡಿ ಗೌರವಿಸಲಾಯಿತು. ‘ಯಕ್ಷಗಾನ ಕಲಾರಂಗ’ ಸಂಸ್ಥೆಗೆ ‘ಯಕ್ಷಗಾನ ಕಲಾ ಗೌರವ – 2023’ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಶಸ್ತಿಯನ್ನು ಸ್ವೀಕರಿಸಿದರು.