ಖಾಸಗಿ ಆಸ್ಪತ್ರೆಯ ಎಡವಟ್ಟಿಗೆ ಉಡುಪಿ ಬಿಜೆಪಿ ಮುಖಂಡನ ಪತ್ನಿ ಬಲಿ.!

ಉಡುಪಿ: ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯ ವೈದ್ಯರು ನೀಡಿದ ಚಿಕಿತ್ಸೆಯ ಎಡವಟ್ಟಿನಿಂದ  ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಮೃತ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ. ಮೃತ ಮಹಿಳೆಯನ್ನು ಬಿಜೆಪಿ ಉಡುಪಿ ನಗರ ಮೋರ್ಚಾದ ಉಪಾಧ್ಯಕ್ಷ, ಇಂದಿರಾನಗರ ನಿವಾಸಿಯಾಗಿರುವ ಶಿವಪ್ರಸಾದ್ ಅವರ ಪತ್ನಿ ಶ್ರೀರಕ್ಷಾ (26) ಎಂದು ಗುರುತಿಸಲಾಗಿದೆ. ಶ್ರೀರಕ್ಷಾ ಅವರು ಕಳೆದ ಮೂರು ದಿನಗಳಿಂದ ವಿಪರೀತ ತಲೆನೋವಿನಿಂದ ಬಳಲುತ್ತಿದ್ದರು. ಹಾಗಾಗಿ ಇಂದು ಬೆಳಿಗ್ಗೆ ಅವರನ್ನು ನಗರದ ಮಿಷನ್ […]