ಪ್ರಧಾನಿ ಮೋದಿಯವರ ಕನಸು ಸಕಾರಗೊಳಿಸಿ: ಜನಸೇವಕ್ ಸಮಾವೇಶದಲ್ಲಿ ಸಿ.ಟಿ. ರವಿ ಕರೆ
ಉಡುಪಿ: ನಾವು ಪ್ರಧಾನಿ ಮೋದಿ ಅವರ ಕನಸು ಸಕಾರಗೊಳಿಸಬೇಕು. ಹಾಗಾಗಿ ಅವರ ಪ್ರತಿರೂಪದಂತೆ ನಾವು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಇಂದು ನಡೆದ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದರು. ಪಕ್ಷದ ಸಿದ್ದಾಂತಕ್ಕೆ ನಾವು ಬದ್ಧರಾಗಿರಬೇಕು. ಜನರು ನಮ್ಮ ಕರ್ತವ್ಯದ ಮೂಲಕ ಮೋದಿ ಅವರನ್ನು ನೋಡುತ್ತಾರೆ. ಹಾಗಾಗಿ ನಾವು ಮೋದಿ ಅವರ ಪ್ರತಿರೂಪವಾಗಿ ಕೆಲಸ ಮಾಡಬೇಕು ಎಂದು […]