ಗರಿಷ್ಠಮಟ್ಟ ತಲುಪಿದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ; ಇಂದಿನ ದರ ಹೀಗಿದೆ
ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬುಧವಾರ ಮತ್ತೆ ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಇಂಧನ ದರ ಈವರೆಗಿನ ಗರಿಷ್ಠಮಟ್ಟ ತಲುಪಿದೆ. ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹107.94 ಆಗಿದ್ದು, ಡೀಸೆಲ್ ದರ ₹96.67ಕ್ಕೆ ತಲುಪಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ₹113.80 ಹಾಗೂ ಡೀಸೆಲ್ ಬೆಲೆ ₹104.75 ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹111.70 ಆಗಿದ್ದು, ಡೀಸೆಲ್ ದರ ₹102.60 ಆಗಿದೆ. ಕೋಲ್ಕತ್ತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹108.45 ಹಾಗೂ […]