ರಾಷ್ಟ್ರಪತಿ ಆಗಮನ: ಅಲ್ಲಲ್ಲಿ ರಸ್ತೆ ಬಂದ್ ನಿಂದ ಪರದಾಡಿದ ಸಾರ್ವಜನಿಕರು

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಸಂಚರಿಸುವ ಮಾರ್ಗ ಹಾಗೂ ಸಂಪರ್ಕ ರಸ್ತೆಗಳನ್ನು ಬೆಳಗ್ಗೆ 9 ಗಂಟೆಯಿಂದಲೇ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಜನಸಾಮಾನ್ಯರು ಬಹಳ ತೊಂದರೆ ಅನುಭವಿಸಿದರು. ಪರದಾಡಿದ ಮದುಮಗ: ರಥಬೀದಿಯ ರಾಘವೇಂದ್ರ ಮಠದಲ್ಲಿ ಮೊದಲೇ ನಿಗದಿ ಮಾಡಿದ್ದ ಮದುವೆಗೆ ತೆರಳುತ್ತಿದ್ದ ಮದುವೆ ಗಂಡು ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ತಡೆದು ನಿಲ್ಲಿಸಿದ ಘಟನೆಯೊಂದು ಕಲ್ಸಂಕದಲ್ಲಿ ಇಂದು ನಡೆದಿದೆ. ಮುಹೂರ್ತಕ್ಕೆ ತಡವಾಗುತ್ತಿದೆಯೆಂದು ಅಂಗಲಾಚಿದ ಬಳಿಕ ಮದುವೆ ಗಂಡು […]