ಸಿಎಂ ಬೊಮ್ಮಾಯಿ ಅವರಿಂದ ಜನಪರ ಬಜೆಟ್ ಮಂಡನೆ; ನಯನಾ ಗಣೇಶ್ ಹರ್ಷ
ಉಡುಪಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿರುವ 2022-23 ಸಾಲಿನ ರಾಜ್ಯ ಬಜೆಟ್ ಸರ್ವಸ್ಪರ್ಶಿ ಮತ್ತು ಜನಪರ ಬಜೆಟ್ ಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ವರಿಗೆ ಸೂರು ಯೋಜನೆಯಡಿ 5 ಲಕ್ಷ ಹೊಸ ಮನೆಗಳ ನಿರ್ಮಾಣ, ವೈದ್ಯಕೀಯ ಸೌಲಭ್ಯಗಳಿಗಾಗಿ ಯಶಸ್ವಿನಿ ವಿಮಾ ಯೋಜನೆ ಮತ್ತೆ ಜಾರಿಗೆ ತರಲಾಗಿದ್ದು, ವಿಧವಾ ವೇತನ, ಆಶಾ ಕಾರ್ಯಕರ್ತೆಯರ ಮತ್ತು ಬಿಸಿಯೂಟ ಸಹಾಯಕರ ಗೌರವ ಧನವನ್ನು ಹೆಚ್ಚಿಸಲಾಗಿದೆ, ಕಾಶಿ ಯಾತ್ರೆಗೆ ತೆರಳುವ ಭಕ್ತರಿಗೆ 5 ಸಾವಿರ ಸಹಾಯ ಧನ, […]