ಮಣಿಪಾಲದ ಕುಂಡೇಲುಕಾಡಿನಲ್ಲಿ ಭೂ ಕುಸಿತ: ಅಪಾಯದ ಭೀತಿಯಲ್ಲಿ ಪ್ರಿಮಿಯರ್ ಕೋರ್ಟ್ ವಸತಿ ಸಮುಚ್ಚಯ

ಮಣಿಪಾಲ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಮಣಿಪಾಲದ ಕುಂಡೇಲುಕಾಡಿನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಇದರಿಂದ ಇಲ್ಲಿನ ಪ್ರಿಮಿಯರ್ ಕೋರ್ಟ್ ಬಹುಮಹಡಿ ಕಟ್ಟಡ ಅಪಾಯದ ಭೀತಿಯನ್ನು ಎದುರಿಸುತ್ತಿದೆ. ಹತ್ತು ಅಂತಸ್ತನ್ನು ಹೊಂದಿರುವ ಈ ಬಹುಮಹಡಿ ಕಟ್ಟಡದಲ್ಲಿ ನೂರಾರು ಫ್ಲ್ಯಾಟ್ ಗಳಿದ್ದು, ಸುಮಾರು ಸಾವಿರಕ್ಕೂ ಹೆಚ್ಚುಮಂದಿ ವಾಸವಾಗಿದ್ದಾರೆ ಎನ್ನಲಾಗಿದೆ. ಕಟ್ಟಡದ ಒಂದು ಭಾಗದಲ್ಲಿ ಮಣ್ಣು ಕುಸಿದಿರುವುದರಿಂದ ವಸತಿ ಸಮುಚ್ಚಯದ ನಿವಾಸಿಗಳನ್ನು ಸ್ಥಳಾಂತರ ಮಾಡುವಂತೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕ್ಕರ್ ಕಟ್ಟಡದ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಈ ಕಟ್ಟಡದ […]