ಮುಂಬೈ ರಸ್ತೆಗಳಿಂದ ಮಾಯವಾಗಲಿದ್ದಾಳೆ ‘ಪ್ರೀಮಿಯರ್ ಪದ್ಮಿನಿ’ : ಇತಿಹಾಸದ ಪುಟ ಸೇರಲಿವೆ ಕಪ್ಪು-ಹಳದಿ ಕಾರುಗಳು
ಮುಂಬೈ: ಆರು ದಶಕಗಳಿಂದ ಮುಂಬೈಯ ಜೀವನಾಡಿಯಾಗಿದ್ದ, ಪ್ರಯಾಣಿಕರನ್ನು ಸುರಕ್ಷಿತವಾಗಿ ತಮ್ಮ ಗಮ್ಯ ಸ್ಥಾನಕ್ಕೆ ತಲುಪಿಸುತ್ತಿದ್ದ ಕಪ್ಪು ಹಳದಿ ಬಣ್ಣದ ‘ಪ್ರೀಮಿಯರ್ ಪದ್ಮಿನಿ’ ಕಾರುಗಳು ಇನ್ನು ಮುಂದೆ ಇತಿಹಾಸದ ಪುಟ ಸೇರಲಿವೆ. ಇತ್ತೀಚೆಗೆ ಮುಂಬೈ ಸಾರಿಗೆ ಇಲಾಖೆಯು ಮಹಾನಗರದಲ್ಲಿ ಓಡುತ್ತಿರುವ ಟ್ಯಾಕ್ಸಿಗಳನ್ನು ತೆಗೆದುಹಾಕಲು ಆದೇಶವನ್ನು ಹೊರಡಿಸಿದೆ. 20 ವರ್ಷ ಅಥವಾ ಅದಕ್ಕಿಂತ ಹಿಂದಿನ ನೋಂದಣಿ ಇರುವ ಟ್ಯಾಕ್ಸಿಗಳನ್ನು ತೆಗೆದುಹಾಕಲು ಈ ಆದೇಶವನ್ನು ನೀಡಲಾಗಿದೆ. 2008 ರಲ್ಲಿ, ಮಹಾರಾಷ್ಟ್ರ ಸರ್ಕಾರವು ಕ್ಯಾಬ್ ಗಳ ವಯಸ್ಸಿನ ಮಿತಿಯನ್ನು 25 ವರ್ಷಗಳಿಗೆ ನಿಗದಿಪಡಿಸಿತು, […]