ರಾಳದೊಳಗಿರುವ ಈ ಮಿಡತೆಯ ಆಯಸ್ಸು 30 ಮಿಲಿಯನ್ ವರ್ಷ! ಪ್ರೇಯಿಂಗ್ ಮ್ಯಾಂಟಿಸ್ ನ ಪಳೆಯುಳಿಕೆ ರಾಳದೊಳಗೆ ಬಂಧಿ
ಜುರಾಸಿಕ್ ಪಾರ್ಕ್ ಚಲನಚಿತ್ರ ನೋಡಿದವರಿಗೆ ಈ ವಿಷಯದ ಬಗ್ಗೆ ತಿಳಿದಿರುತ್ತದೆ. ಮರದ ರಾಳದೊಳಗೆ ಬಂಧಿಯಾಗಿದ್ದ ಸೊಳ್ಳೆಯ ಪಳೆಯುಳಿಕೆಯ ರಕ್ತದಿಂದ ಡೈನೋಸಾರ್ ಗಳ ಡಿ.ಎನ್.ಎ ಅನ್ನ್ನು ಹೊರತೆಗೆದು ದೈತ್ಯಾಕಾರದ ಜೀವಿಗಳನ್ನು ಮರು ಸೃಷ್ಟಿಸುವ ಜುರಾಸಿಕ್ ಪಾರ್ಕ್ ಚಿತ್ರ ನೋಡದೆ ಇರುವವರಿಲ್ಲ. ಈ ಕಥೆ ಕಾಲ್ಪನಿಕವಾದರೂ ಈ ರೀತಿ ಮರದ ರಾಳ, ಮಂಜುಗಡ್ಡೆಯೊಳಗೆ ಮಿಲಿಯಾಂತರ ವರ್ಷಗಳಿಂದ ಬಂಧಿಯಾಗಿರುವ ಕ್ರಿಮಿ-ಕೀಟಗಳು ನಿಜವಾಗಿಯೂ ಇರುತ್ತವೆ ಮತ್ತು ಅವು ಭೂಮಿಯ ಜೀವವಿಕಾಸದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತವೆ. ಅಂಬರ್ ಎಂದರೆ ಪಳೆಯುಳಿಕೆಗೊಂಡ ಮರದ ರಾಳವಾಗಿದ್ದು, […]