ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಪ್ರಥಮ ವರ್ಷದ ವಾರ್ಷಿಕ ಸಾಮಾನ್ಯ ಸಭೆ ಸಂಪನ್ನ
ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಪ್ರಥಮ ವರ್ಷದ ವಾರ್ಷಿಕ ಸಾಮಾನ್ಯ ಸಭೆಯು ಅ.29 ಭಾನುವಾರದಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಅಧ್ಯಕ್ಷ, ಉಡುಪಿ ಕಾರ್ಸ್ ನ ಮೊಹಮ್ಮದ್ ಅಶ್ರಫ್ ಇವರು ವಹಿಸಿದ್ದರು. ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಕಾರ್ಯದರ್ಶಿ ವರದಿ ವಾಚಿಸಿದರು. ಕೋಶಾಧಿಕಾರಿ ಮಂಡಳಿ ಸಭೆಯ ವರದಿ ನೀಡಿದರು. ಸಂಘದ ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ […]
ಕೃಷ್ಣಾನುಗ್ರಹ ದತ್ತು ಕೇಂದ್ರದ ಮಕ್ಕಳ ಜೊತೆ ಸ್ವಾತಂತ್ರ್ಯ ದಿನ ಆಚರಿಸಿದ ಪೂರ್ವ ಸ್ವಾಮ್ಯದ ವಾಹನಗಳ ವಿತರಕರ ಸಂಘ: ಮಕ್ಕಳಿಗೆ ಅಗತ್ಯ ವಸ್ತು ವಿತರಣೆ
ಉಡುಪಿ: ಪೂರ್ವ ಸ್ವಾಮ್ಯದ ವಾಹನಗಳ ವಿತರಕರ ಸಂಘದ ವತಿಯಿಂದ ಕೃಷ್ಣಾನುಗ್ರಹ ಅರ್ಹ ಸಂಸ್ಥೆ ಹಾಗೂ ದತ್ತು ಕೇಂದ್ರದಲ್ಲಿ ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ವತಿಯಿಂದ ಮಕ್ಕಳಿಗೆ ಹಾಲಿನ ಹುಡಿ, ಹಾಸಿಗೆ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪೂರ್ವ ಸ್ವಾಮ್ಯದ ವಾಹನಗಳ ವಿತರಕರ ಸಂಘದ ಅಧ್ಯಕ್ಷ, ಉಡುಪಿ ಕಾರ್ಸ್ ಮಾಲಕ ಮೊಹಮ್ಮದ್ ಅಶ್ರಪ್, ಕೃಷ್ಣಾನುಗ್ರಹ ಅನಾಥಾಲಯದ ಅಧ್ಯಕ್ಷ ಡಾ. ಉಮೇಶ್ ಪ್ರಭು, ಸಂಘದ ಕಾರ್ಯದರ್ಶಿ, ಸಮಿತಿ ಸದಸ್ಯರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. […]
ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ವತಿಯಿಂದ ಜೀವಮಾನ ಸದಸ್ಯತ್ವ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ
ಉಡುಪಿ: ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ವತಿಯಿಂದ ಸಂಘದ ಎಲ್ಲ ಸಮಿತಿ ಸದಸ್ಯರಿಗೆ ಹಾಗೂ ಆಜೀವ ಸದಸ್ಯರಿಗೆ ಜೀವಮಾನ ಸದಸ್ಯತ್ವ(ಲೈಫ್ ಟೈಮ್ ಮೆಂಬರ್ಶಿಪ್) ಪ್ರಮಾಣ ಪತ್ರವನ್ನು ಹಾಗೂ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಉಡುಪಿ, ಬ್ರಹ್ಮಾವರ, ಕುಂದಾಪುರ, ಕಾರ್ಕಳ ಮತ್ತು ಹಿರಿಯಡ್ಕದ ಎಲ್ಲಾ ಆಜೀವ ಸದಸ್ಯರ ಕಚೇರಿಗೆ ತೆರಳಿ ಅವರ ಕುಶಲಕ್ಷೇಮ ವಿಚಾರಿಸಿ ಬಳಿಕ ಅವರಿಗೆ ಜೀವಮಾನ ಸದಸ್ಯತ್ವ ಪ್ರಮಾಣಪತ್ರವನ್ನು ಹಾಗೂ ಗುರುತಿನ ಚೀಟಿಯನ್ನು ನೀಡುವ ಕಾರ್ಯವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು […]
ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಉದ್ಘಾಟನಾ ಕಾರ್ಯಕ್ರಮ
ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಉದ್ಘಾಟನಾ ಕಾರ್ಯಕ್ರಮವು ಸೆ.18 ಭಾನುವಾರದಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಂಕರಪುರ ಸಂತ ಜಾನ್ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮೋಹನ್ ದಾಸ್ ಆರ್ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ವ ಸ್ವಾಮ್ಯದ ವಾಹನ ವಿತರಕ ಸಂಘದ ಸಂಸ್ಥಾಪಕ ಉದಯ್ ಕಿರಣ್ ವಹಿಸಿದ್ದರು. ಉಡುಪಿ ಆರಕ್ಷಕ ಠಾಣೆಯ ಉಪಅಧೀಕ್ಷಕ ವಾಸಪ್ಪ ನಾಯಕ್, ಉಡುಪಿ ಟ್ರಾಫಿಕ್ ಪೊಲೀಸ್ ಎಸ್ ಐ ಅಬ್ದುಲ್ ಖಾದರ್ , ದಕ್ಷಿಣ ಕನ್ನಡ […]