ಉಡುಪಿ ಕಾರ್ಸ್ ಇದರ 6ನೇ ವರ್ಷದ ವಾರ್ಷಿಕೋತ್ಸವ ಆಚರಣೆ

ಉಡುಪಿ: ಪುತ್ತಿಗೆ ಪರ್ಯಾಯದ ಶುಭ ಸಂದರ್ಭದಲ್ಲಿ ಉಡುಪಿ ಕಾರ್ಸ್ ಇದರ 6ನೇ ವರ್ಷದ ವಾರ್ಷಿಕೋತ್ಸವವನ್ನು ಜೋಡುಕಟ್ಟೆಯಲ್ಲಿರುವ ಉಡುಪಿ ಕಾರ್ಸ್ ಕಟ್ಟಡದಲ್ಲಿ ಗ್ರಾಹಕರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಕಳೆದ ಆರು ವರ್ಷಗಳಿಂದ ನಿರಂತರವಾಗಿ ಬೆಂಬಲ ನೀಡಿ ಸಹಕರಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಮಾಂಡವಿ ಬಿಲ್ಡರ್ಸ್ ನ ಎಂ.ಡಿ. ಜೆರಿ ವಿನ್ಸೆಂಟ್ ಡಯಾಸ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಡುಪಿ ಕಾರ್ಸ್ ಸಂಸ್ಥೆಯ ಸಂಸ್ಥಾಪಕ ಮೊಹಮ್ಮದ್ ಅಶ್ರಫ್ ಮತ್ತು ಜಿಯಾದ್ ಅಹಮದ್, ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.