ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಸರ್ಕಾರಿ ಶಾಲೆಯ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳಿಗೆ ಆಟಿಕೆಗಳ ಕೊಡುಗೆ

ಬ್ರಹ್ಮಾವರ: ರಾಜ್ಯದ 262 ಸರ್ಕಾರಿ ಶಾಲೆಗಳಲ್ಲಿ ಇಂದಿನಿಂದಲೇ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳು ಪ್ರಾರಂಭಗೊಂಡಿದ್ದು, ಬ್ರಹ್ಮಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ರಗೋಡು ಇಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಶಾಲಾ ಮಕ್ಕಳ ಕಲಿಕೆಗೆ ಬೇಕಾದ ಪರಿಕರ ಮತ್ತು ಆಟಿಕೆಗಳನ್ನು ಕೊಡುಗೆ ರೂಪದಲ್ಲಿ ನೀಡಲಾಯಿತು. ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಆಟಿಕೆಗಳನ್ನು ಹಸ್ತಾಂತರಿಸಿದರು.

ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ

ಉಡುಪಿ: ಜಿಲ್ಲೆಯಾದ್ಯಂತ 1000 ಲಕ್ಷ್ಮಣ ಫಲದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಮುಂದಾಗಿರುವ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘವು ಕಳೆದ ಒಂದು ವಾರದಲ್ಲಿ ಶಾಲೆ-ಕಾಲೇಜು, ಸಂಸ್ಥೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಗಿಡಗಳನ್ನು ನೆಟ್ಟು ಬೇಲಿ ಹಾಕಿ ಪರಿಸರ ರಕ್ಷಣೆಗೆ ತನ್ನಿಂದಾದ ಕೊಡುಗೆ ನೀಡುತ್ತಿದೆ. ಮುಂದಿನ ವರ್ಷ ಅತ್ಯುತ್ತಮವಾಗಿ ಸಾಕಲ್ಪಟ್ಟ ಗಿಡಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರ್ಮಾವನ್ನೂ ಸಂಘವು ಹಮ್ಮಿಕೊಂಡಿದೆ. ಸಂಘದ ಈ ಕಾರ್ಯಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಲವಾರು ಜನರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಪರಿಸರ […]

ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಲಕ್ಷ್ಮಣ ಫಲ ಗಿಡ ವಿತರಣೆ: ಅತ್ಯುತ್ತಮವಾಗಿ ಪೋಷಿಸಿದ ಗಿಡಗಳಿಗೆ ಬಹುಮಾನ ಘೋಷಣೆ

ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಲಕ್ಷ್ಮಣ ಫಲವನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಗುರುವಾರದಂದು ಭುಜಂಗ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ರಮೇಶ್ ಪಿ ನಾಯ್ಕ್ , ಪರಿಸರ ದಿನವನ್ನು ಕೇವಲ ಒಂದು ದಿನದ ಮಟ್ಟಿಗೆ ಆಚರಿಸದೆ ವರ್ಷಪೂರ್ತಿ ಆಚರಿಸುವ ಕಾರ್ಯಕ್ಕೆ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದವರು ಮುಂದಾಗಿರುವುದು ಅತ್ಯುತ್ತಮ ವಿಚಾರ. ಜಿಲ್ಲೆಯಾದ್ಯಂತ 1000 ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಸಂಘದ ವತಿಯಿಂದ ನಡೆಯುತ್ತಿರುವುದು ಅಭಿನಂದನಾರ್ಹ. ಗಿಡಗಳನ್ನು ನೆಡುವುದು […]

ನಾಳೆ ಭುಜಂಗ ಪಾರ್ಕಿನಲ್ಲಿ ಉಚಿತ ಔಷಧೀಯ ಸಸ್ಯಗಳ ವಿತರಣೆ

ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಜೂನ್ 15 ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿಯ ಭುಜಂಗ ಪಾರ್ಕಿನಲ್ಲಿ 1000 ಕ್ಕೂ ಮಿಕ್ಕಿ ಔಷಧೀಯ ಸಸ್ಯಗಳ ಉಚಿತ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ನಗರಸಭೆಯ ಪೌರಾಯುಕ್ತ ರಮೇಶ್ ಪಿ ನಾಯ್ಕ್ ವಹಿಸಿಕೊಳ್ಲಲಿದ್ದು, ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್.ಟಿ.ಓ ಸಾರಿಗೆ ಅಧಿಕಾರಿ ರವಿ ಶಂಕರ್ ಪಿ, ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಆಚಾರ್ಯ, […]

ಉಡುಪಿ: ಜೂನ್ 15 ರಂದು ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಔಷಧೀಯ ಸಸ್ಯಗಳ ವಿತರಣೆ

ಉಡುಪಿ: ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎನ್ನಲಾದ ಔಷಧೀಯ ಗುಣವುಳ್ಳ ಲಕ್ಷಣ ಫಲ ಹಾಗೂ ಇನ್ನಿತರ ಔಷಧೀಯ ಸಸ್ಯಗಳನ್ನು ಇಲ್ಲಿನ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಜೂನ್ 15 ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಭುಜಂಗ ಪಾರ್ಕಿನಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.