ಕಂಬಳ ಕೋಣಕೆ ಇವರು ತಯಾರಿಸೋ ಅಲಂಕಾರಿಕ ಹಗ್ಗಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳಿಗೆ ಅಲಂಕಾರಿಕವಾಗಿ ಹಗ್ಗಗಳನ್ನು ಹೆಣೆಯುತ್ತಾರೆ. ಕಂಬಳ ಕೋಣಗಳ ಜೋಡಿಯನ್ನು ಅಲಂಕರಿಸಲು ಈ ಬಣ್ಣದ ಹಗ್ಗಗಳೇ ಆಧಾರ. ಈ ಚಂದದ ಹಗ್ಗ ನೇಯುವ ಕಲೆಯು ಅನೇಕರಿಗೆ ತಿಳಿದಿಲ್ಲ . ನೆತ್ತಿಯ ಮೇಲೆ ಕೋಡಿಗೆ ಕಟ್ಟಿದ ಹಗ್ಗ, ಗೊಂಡೆ, ಬೆಳ್ಳಿ ಪದಕದೊಂದಿಗೆ […]