ಕೆಜಿಎಫ್ 2 ಚಿತ್ರದಲ್ಲಿ ಅನಂತ್ ನಾಗ್ ಬದಲು ಪ್ರಕಾಶ್ ರೈ?: ನಿರ್ದೇಶಕ ಹೇಳಿದ್ದು ಏನು
ಬೆಂಗಳೂರು: ಕೆಜಿಎಫ್ 2 ಚಿತ್ರದಲ್ಲಿ ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಮುಂದುವರಿಸಲಿದ್ದಾರೆ ಎಂಬ ವದಂತಿಗೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದ್ದಾರೆ. ವಿವಾದಕ್ಕೆ ಕಾರಣ ಏನು.? ಕೆಜಿಎಫ್ 2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಪ್ರಕಾಶ್ ರೈ ಚಿತ್ರವನ್ನು ಚಿತ್ರತಂಡ ಟ್ವೀಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟ ಚರ್ಚೆಯನ್ನು ಹುಟ್ಟುಹಾಕಿತ್ತು. ಕೆಜಿಎಫ್ ಮೊದಲ ಭಾಗದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಮುಂದುವರೆಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಕೆಲವರು ನಾವು ಸಿನಿಮಾವನ್ನು […]