ಮತ್ತೆ ಸಂಘ ಕಾರ್ಯಕ್ಕೆ ಮರಳಿದ ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ
ಉಡುಪಿ: ಸಾಮಾಜಿಕ ಕಾರ್ಯಕರ್ತ, ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಅವರು ಮತ್ತೆ ಸಂಘ ಕಾರ್ಯಕ್ಕೆ ಮರಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪ್ರಕಾಶ್ ಮಲ್ಪೆ ಅವರು ಕಳೆದ ಮೂರು ವರ್ಷಗಳಿಂದ ಸಂಘದ ಯಾವುದೇ ಜವಾಬ್ದಾರಿ ಹೊಂದಿರಲಿಲ್ಲ. ವೈಯಕ್ತಿಕ ಕಾರಣಗಳಿಂದ ಸಂಘದ ಜವಾಬ್ದಾರಿಗಳಿಂದ ಅಲ್ಪ ಸಮಯದ ವಿರಾಮ ಪಡೆದಿದ್ದರು. ಇದೀಗ ಮತ್ತೆ ಇವರು ಮಂಗಳೂರು ವಿಭಾಗ ಮಟ್ಟದ ಮಹತ್ವದ ಜವಾಬ್ದಾರಿಗೆ ಮರಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರ ಸಭೆಯಲ್ಲಿ ರಾಷ್ಟ್ರೀಯ ಸಹ ಕಾರ್ಯವಾಹರಾದ […]