ಕಾಮಗಾರಿಗೆ ಪಿಕ್ಕಾಸು ಬೀಳಬೇಕಾದ್ರೆ ಮೊದಲು 40% ಕಮಿಷನ್ ಕೊಡಬೇಕು: ಬಿಜೆಪಿ ಸರಕಾರದ ವಿರುದ್ಧ ಸೊರಕೆ ವಾಗ್ದಾಳಿ

ಉಡುಪಿ: ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಬೇಕಾದ್ರೆ ಮೊದಲು 40 ಪರ್ಸೆಂಟ್ ಕಮಿಷನ್ ಪಾವತಿಸಬೇಕು. ಆದಾದ ಬಳಿಕವೇ ಕಾಮಗಾರಿಗೆ ಪಿಕ್ಕಾಸು ಬೀಳುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು. ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರಾದ್ಯಂತ ಹಮ್ಮಿಕೊಳ್ಳಲಾದ ಕರಾವಳಿ ಪ್ರಜಾಧ್ವನಿ ಯಾತ್ರೆಯ ಪ್ರಯುಕ್ತ ಆತ್ರಾಡಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವುದೇ ಸರಕಾರಿ ಕಚೇರಿಗಳಿಗೆ ಹೋಗಬೇಕಾದರೂ ದಲ್ಲಾಳಿಗಳ ಮೂಲಕವೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ‌. ಉತ್ಸವಗಳನ್ನು ಮಾಡುವ ಮೂಲಕ ಜನರ ತೆರಿಗೆಯ […]

ಬೊಮ್ಮಾಯಿ ಸರ್ಕಾರ ವಿಫಲ; ಮೋದಿ ಹೆಸರಲ್ಲಿ ಬಿಜೆಪಿ ಮತಯಾಚನೆ: ಡಿ.ಕೆ.ಶಿವಕುಮಾರ್

ಉಡುಪಿ: ರಾಜ್ಯದ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ದಯನೀಯವಾಗಿ ವಿಫಲವಾಗಿದ್ದು, ಪಕ್ಷವು 2023 ರ ಚುನಾವಣೆಯನ್ನು ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಎದುರಿಸಬೇಕಾಗಿದೆ. ರಾಜ್ಯ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಮತ್ತು ಅದಕ್ಕೀಗ ರಾಷ್ಟ್ರೀಯ ನಾಯಕರ ಅವಶ್ಯಕತೆಯಿದೆ. ಬಿಜೆಪಿಯು ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಿಲ್ಲ ಮತ್ತು ಗಗನಕ್ಕೇರಿರುವ ಬೆಲೆ ಏರಿಕೆಯನ್ನು ತಡೆಯಲೂ ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು. ಅವರು ಭಾನುವಾರ ಉಡುಪಿಯ ಮಿಶನ್ ಕೌಂಪಾಡಿನ […]