ಕೆ.ಪಿ.ಟಿ.ಸಿ.ಎಲ್ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಪ್ರಕಟ
ಬೆಂಗಳೂರು: ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ಸಹಾಯಕ ಎಂಜನಿಯರ್ ಮತ್ತು ಕಿರಿಯ ಎಂಜನಿಯರ್ಗಳು ಹಾಗೂ ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಇಂಧನ ಸಚಿವ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕೆ.ಪಿ.ಟಿ.ಸಿ.ಎಲ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಹಾರ್ದಿಕ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸುತ್ತೇನೆ. ಫಲಿತಾಂಶವನ್ನು ತಿಳಿಯಲು https://cetonline.karnataka.gov.in/kea/kptcl2022 ಲಿಂಕ್ ಅನ್ನು […]
ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಪರಿಷ್ಕರಣೆ: ಬೆಸ್ಕಾಂ 37 ಪೈಸೆ; ಮೆಸ್ಕಾಂ 39 ಪೈಸೆ ಇಳಿಕೆ
ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು (ಎಫ್‌ಎಸಿ) ಪರಿಷ್ಕರಿಸಿರುವುದರಿಂದ ಮುಂಬರುವ ತ್ರೈಮಾಸಿಕಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಗ್ರಾಹಕರ ವಿದ್ಯುತ್ ಬಿಲ್‌ಗಳು ಕ್ರಮವಾಗಿ 37 ಪೈಸೆ ಮತ್ತು 39 ಪೈಸೆ ಇಳಿಕೆ ಕಾಣಲಿವೆ. ಹೊಸ ದರಗಳು ಜನವರಿ 1 ಮತ್ತು ಮಾರ್ಚ್ 31, 2023 ರ ನಡುವೆ ರಚಿಸಲಾಗುವ ಬಿಲ್‌ಗಳಿಗೆ ಅನ್ವಯಿಸುತ್ತವೆ. ಹಿಂದಿನ ಪರಿಷ್ಕರಣೆಯಲ್ಲಿ, ಅಕ್ಟೋಬರ್‌ನಿಂದ ಡಿಸೆಂಬರ್‌ನಿಂದ ನಡೆಯುತ್ತಿರುವ ತ್ರೈಮಾಸಿಕದಲ್ಲಿ […]
ಡಿ. 27 ರಿಂದ 30 ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಡಿಸೆಂಬರ್ 27 ರಿಂದ 30 ರ ವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ಡಿ. 27 ರಂದು 220/110/11ಕೆವಿ ಕೇಮಾರ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಫೀಡರ್‌ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ನಿಟ್ಟೆ ವಾಟರ್ ಸಪ್ಲೈ, 110ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆವಿ ಪದವು ಫೀಡರ್ ಹಾಗೂ 110 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಫೀಡರ್‌ಗಳಾದ […]
ಕುಂದಾಪುರ: ಡಿ. 22 ರಂದು ವಿದ್ಯುತ್ ವ್ಯತ್ಯಯ
ಕುಂದಾಪುರ: 110/11 ಕೆ.ವಿ ಹೊಸಂಗಡಿ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 22 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಸಿದ್ಧಾಪುರ, ಹಳ್ಳಿಹೊಳೆ, ಹೊಸಂಗಡಿ, ಜನ್ಸಾಲೆ ಮಾರ್ಗಗಳಲ್ಲಿ, ಉಳ್ಳೂರು-74, ಯಡಮೊಗೆ, ಕಮಲಶಿಲೆ, ಮತ್ತು ಆಜ್ರಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಡಿ. 20 ರಂದು ಜಿಲ್ಲಾವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಡಿಸೆಂಬರ್ 20 ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಕುಂದಾಪುರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110/11 ಕೆ.ವಿ ಉಪಕೇಂದ್ರಗಳಾದ ಕುಂದಾಪುರ ಮತ್ತು ನಾವುಂದ ಹಾಗೂ 33/11 ಕೆ.ವಿ ಉಪಕೇಂದ್ರಗಳಾದ ತಲ್ಲೂರು, ಬೈಂದೂರು, ಕೊಲ್ಲೂರು ಮತ್ತು ಗಂಗೊಳ್ಳಿಯಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳ ಜೊತೆಗೆ 33 ಕೆ.ವಿ ಸೌಕೂರು ಏತ ನೀರಾವರಿ ವಿದ್ಯುತ್ […]