ವಿದ್ಯುತ್ ಸಂಪರ್ಕಕ್ಕಾಗಿ ಎನ್ಓಸಿ ಪಡೆಯುವ ಕ್ರಮಕ್ಕೆ ವಾರದೊಳಗೆ ತಿದ್ದುಪಡಿ: ಇಂಧನ ಸಚಿವ ಸುನಿಲ್ ಕುಮಾರ್

ಬೈಂದೂರು: ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ವಿದ್ಯುತ್ ಪಡೆಯಲು ಸ್ಥಳೀಯಡಳಿತದಿಂದ ಎನ್‌ಓಸಿ ಪಡೆಯುವ ಕ್ರಮವನ್ನು ಒಂದು ವಾರದೊಳಗೆ ತಿದ್ದುಪಡಿ ಮಾಡುತ್ತೇವೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು. ಸೋಮವಾರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬೈಂದೂರು ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಈ ನೂತನ ಕ್ರಮವನ್ನು ಮುಂದಿನ ವಾರದೊಳಗೆ ಅಧಿಕೃವಾಗಿ ಜಾರಿಗೊಳಿಸುತ್ತೇನೆ. ಇದರಿಂದ ಸುಮಾರು 2.50 ಲಕ್ಷ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆಯುತ್ತದೆ […]