ಈ ಅಜ್ಜಿಯ ಕೈಯಲ್ಲರಳುವ ಮಣ್ಣಿನ ಪಾತ್ರೆ ನೋಡಿದ್ರೆ ಬೆರಗಾಗ್ತೀರಿ : ಕಡಾರಿಯ ಮೀನಜ್ಜಿಯ ಮಣ್ಣಿನ ಪಾತ್ರೆಗಳನ್ನೊಮ್ಮೆ ಕೊಂಡು ನೋಡಿ

ಕುಂಬಾರಿಕೆಯ ಕಾಯಕ ಧನಿಕನಾಗಿಸುವ ಬದಲು ಧರಿದ್ರನಾಗಿಸುವುದೇ ಹೆಚ್ಚು. ಇಷ್ಟಕ್ಕೂ ನಂಬಿದ ಕುಲ ಕಸುಬು ಬಿಡಲಾಗದೇ ತಂತ್ರಜ್ಞಾನಯುಗದಲ್ಲೂ ಮಣ್ಣಿಗೆ ಮಣ್ಣಿನದೇ ಗುಣಗಳಿವೆ ಎಂದು ಮಣ್ಣಿನ ಜೊತೆಗಿನ ಹೋರಾಟ ಜಾರಿಯಲ್ಲಿಟ್ಟುಕೊಂಡಿರುವುದು ಕೆಲವೇ ಕೆಲವು ಜನರು. ಅದರಲ್ಲೂ 70 ರ ಇಳಿವಯಸ್ಸಿನ ವೃದ್ಧೆಯಲ್ಲಿ ಇಂತಹ ಛಲ ಇದೆ ಎಂದರೆ ನಾವು ಆಭಿಮಾನದ ಸೆಲ್ಯೂಟ್ ಕೊಡಲೇಬೇಕು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ-ರಾಷ್ಟ್ರೀಯ ಹೆದ್ದಾರಿಯ ಸುಮ್ಮ ಕಡಾರಿ ಎಂಬಲ್ಲಿನ ವಯೋವೃದ್ಧೆ ಮೀನಾ ಕುಲಾಲ್(70) ಅವರು ಬಡತನದ ಬೇಗೆಯ ನಡುವೆ ಬಾಲ್ಯದಿಂದಲೇ ಈ ಕಸುಬು […]