ಮೃತದೇಹದ ಮರಣೋತ್ತರ ಪರೀಕ್ಷೆಯ ನೂತನ ವಿಧಾನ ‘ವರ್ಟೊಪ್ಸಿ’: ಆಗ್ನೇಯ ಏಷ್ಯಾದಲ್ಲಿ ವರ್ಟೊಪ್ಸಿ ತಂತ್ರಜ್ಞಾನ ಬಳಸುವ ಏಕೈಕ ಆಸ್ಪತ್ರೆ ದೆಹಲಿ ಏಮ್ಸ್
ಶವಪರೀಕ್ಷೆ ಅಥವಾ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಮ್) ಎನ್ನುವುದು ಅತ್ಯಂತ ವಿಶೇಷವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಇದು ವ್ಯಕ್ತಿಯ ಸಾವಿನ ಕಾರಣ ಮತ್ತು ವಿಧಾನವನ್ನು ನಿರ್ಧರಿಸುವ ಮತ್ತು ಯಾವುದೇ ರೋಗ ಅಥವಾ ಗಾಯವನ್ನು ಮೌಲ್ಯಮಾಪನ ಮಾಡುವ ಶವದ ಸಂಪೂರ್ಣ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಸಾಂಪ್ರದಾಯಿಕ ಶವ ಪರೀಕ್ಷೆಯಲ್ಲಿ ಶವದ ದೇಹವನ್ನು ಕತ್ತರಿಸಿ ಪರೀಕ್ಷೆ ನಡೆಸಬೇಕಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ಮೃತರ ಸಂಬಂಧಿಕರಿಗೆ ಈ ವಿಧಾನವು ಇರಿಸು ಮುರುಸನ್ನು ಉಂಟುಮಾಡುತ್ತದೆ. ಸಂಪ್ರದಾಯಗಳಲ್ಲಿ ಮರಣಾನಂತರ ಶವವನ್ನು ಕತ್ತರಿಸುವುದು ನಿಷಿದ್ದವಿದ್ದಲ್ಲಿ ಅಂತಹ ಕುಟುಂಬಿಕರು ವೇದನೆ ಅನುಭವಿಸಬೇಕಾಗುತ್ತದೆ. ಸಾಂಪ್ರದಾಯಿಕ […]