ರಿಯಲ್ ಸ್ಟಾರ್ ಉಪೇಂದ್ರ ಅವರ “ಬುದ್ದಿವಂತ-2” ಚಿತ್ರದ ಪೋಸ್ಟರ್ ಬಿಡುಗಡೆ   

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ “ಬುದ್ಧಿವಂತ-2” ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರುತ್ತಿದ್ದು, ವಿಶೇಷವಾಗಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎರಡು ಪೋಸ್ಟರ್ ಗಳ ಮೂಲಕ ಉಪೇಂದ್ರ ದರ್ಶನವನ್ನು ನಿರ್ದೇಶಕರು ಮಾಡಿಸಿದ್ದಾರೆ. ಎರಡೂ ಪೋಸ್ಟರ್ ಗಳು ಒಂದಷ್ಟು ಕುತೂಹಲ ಹುಟ್ಟಿಸಿವೆ. ಮೌರ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ನಟಿ ಸೋನಾಲ್ ಹಾಗೂ ಮೇಘನಾ ರಾಜ್ ಚಿತ್ರದ ನಾಯಕಿಯರಾಗಿದ್ದು, ನಟ ಆದಿತ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬುದ್ಧಿವಂತ 2 ಎಂಬ ಹೆಸರಿನ ಕಾರಣ ಸಿನಿಮಾದ ಮೇಲೆ ನಿರೀಕ್ಷೆ ದೊಡ್ಡದಾಗಿದೆ.  […]

ಸಲ್ಮಾನ್ ಖಾನ್ ಅಭಿನಯದ “ಭಾರತ್” ಸಿನಿಮಾ ಪೋಸ್ಟರ್ ರಿಲೀಸ್

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ “ಭಾರತ್” ಚಿತ್ರದ ಸಲ್ಮಾನ್ ಖಾನ್ ಲುಕ್ ರಿಲೀಸ್ ಆಗಿದೆ. ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್ ವಯಸ್ಸಾದ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಉದ್ದನೆಯ ಬಿಳಿ ಕೂದಲು ಮತ್ತು ಬಿಳಿ ದಾಡಿ ಬಿಟ್ಟಿರುವ ಸಲ್ಲುಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಈ ಪೋಸ್ಟರ್ ನಲ್ಲಿ ಬ್ಯಾಡ್ ಬಾಯ್ ಗೆ ವಯಸ್ಸಾದರೂ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಬಿಳಿ ಕೂದಲನ್ನು ಸ್ಪೈಕ್ ಮಾಡಿ, ಉದ್ದ ಮೀಸೆ […]