ಅಂಗಡಿಗೆ ನುಗ್ಗಿದ ಪೊಲೀಸ್ ವಾಹನ: ಓರ್ವ ಮಹಿಳೆಗೆ ಗಾಯ

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ವಾಹನವೊಂದು ದಿನಸಿ ಅಂಗಡಿಗೆ ನುಗ್ಗಿದ ಘಟನೆ ಬೆಳ್ತಂಗಡಿಯ ನಾರಾವಿ ಪೇಟೆ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆಗೆ ಗಾಯವಾಗಿದ್ದು, ಅವರನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಪೊಲೀಸ್ ಠಾಣೆಯ ಬೊಲೆರೋ ವಾಹನ. ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ನಾರಾವಿ ಕೆಳಗಿನ ಪೇಟೆಯ ರಮೇಶ್‌ ಎಂಬುವವರ ದಿನಸಿ ಅಂಗಡಿಗೆ ನುಗ್ಗಿದೆ. ಇದರ ಪರಿಣಾಮ ಅಂಗಡಿಯ ಮುಂಭಾಗದಲ್ಲಿದ್ದ ಸಾಮಗ್ರಿಗಳು ಜಖಂಗೊಂಡಿದೆ.