ಪಿಎಂಶ್ರೀ ಶಾಲೆ ಯೋಜನೆಗೆ ಅವಿಭಜಿತ ದ.ಕ ಜಿಲ್ಲೆಯ 16 ಶಾಲೆಗಳು ಆಯ್ಕೆ

ಮಂಗಳೂರು: ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಆಶಯದೊಂದಿಗೆ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಕೇಂದ್ರ ಸರ್ಕಾರದ ‘ಪಿಎಂಶ್ರೀ ಶಾಲೆ’ ಯೋಜನೆಗೆ ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಶಾಲೆಗಳು ಆಯ್ಕೆಯಾಗಿವೆ. ದೇಶದಲ್ಲಿ ಒಟ್ಟು 14,500 ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ ಕರ್ನಾಟಕದ 129 ಶಾಲೆಗಳು ಸೇರಿದಂತೆ ಒಟ್ಟು 6,207 ಶಾಲೆಗಳನ್ನು ಆಯ್ಕೆ ಮಾಡಿತ್ತು. ಎರಡನೇ ಹಂತದಲ್ಲಿ ರಾಜ್ಯದ 245 ಶಾಲೆಗಳು ಪಿಎಂಶ್ರೀಗೆ ಆಯ್ಕೆಯಾಗಿದ್ದು, ಅದರಲ್ಲಿ ದಕ್ಷಿಣ […]