ದೀಪಾವಳಿಗೆ ಭರ್ಜರಿ ಉಡುಗೊರೆ: 75,000 ಯುವಕರಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸಲಿರುವ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತದ ಸುಮಾರು 75,000 ಯುವಕರು ಮತ್ತು ಅವರ ಕುಟುಂಬಗಳಿಗೆ ದೀಪಾವಳಿಯನ್ನು ವಿಶೇಷವಾಗಿಸಿದ್ದು, ಅಕ್ಟೋಬರ್ 22 ರಂದು ಯುವಕರಿಗೆ ಅವರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ಪಟ್ಟಿ ಮಾಡಲಾದ ಯುವಕರಿಗೆ ಪ್ರಧಾನಿ ಮೋದಿ ವರ್ಚುವಲ್ ಕಾರ್ಯಕ್ರಮದ ಮೂಲಕ ನೇಮಕಾತಿ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿಯು ಎಲ್ಲಾ ಸಚಿವಾಲಯಗಳಿಗೆ ಆಯಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಪತ್ತೆಹಚ್ಚಲು ಮತ್ತು ನಿಗದಿತ ಸಮಯದಲ್ಲಿ ಭರ್ತಿ ಮಾಡಲು ಹೇಳಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. […]
ದೇಶದ ಭದ್ರತೆಯಲ್ಲಿ ಗುಜರಾತಿನ ಪಾತ್ರ ನಿರ್ಣಾಯಕ: ಪ್ರಧಾನಿ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ 2022 ಅನ್ನು ಉದ್ಘಾಟಿಸಿ, ದೀಸಾದಲ್ಲಿ ಹೊಸ ವಾಯುನೆಲೆಗೆ ಶಂಕುಸ್ಥಾಪನೆ ಮಾಡಿದರು. ಹೊಸ ವಾಯುನೆಲೆಯು ದೇಶದ ಭದ್ರತೆಗೆ ಪರಿಣಾಮಕಾರಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು. ಗುಜರಾತ್ ಭಾರತದ ರಕ್ಷಣಾ ಕೇಂದ್ರವಾಗಲಿದೆ ಮತ್ತು ಭಾರತದ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದ ಅವರು, ಹೊಸ ಏರ್‌ಫೀಲ್ಡ್ ನಿರ್ಮಾಣದ ಬಗ್ಗೆ ದೀಸಾದ ಜನರು ಉತ್ಸುಕರಾಗಿದ್ದಾರೆಂದು ನಾನು ಪರದೆಯ ಮೇಲೆ ನೋಡುತ್ತಿದ್ದೆ. ಈ ಏರ್‌ಫೀಲ್ಡ್ ಪ್ರಮುಖ ಪಾತ್ರ ವಹಿಸುತ್ತದೆ. ದೀಸಾ […]
ಉಜ್ಜಯಿನಿಯಲ್ಲಿ ಮಹಾಕಾಲ್ ಲೋಕ್ ಕಾರಿಡಾರ್ 1 ನೇ ಹಂತವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಉಜ್ಜಯಿನಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಮಹಾಕಾಲ್ ಲೋಕ್ ಯೋಜನೆಯ ಮೊದಲ ಹಂತವನ್ನು ದೇಶಕ್ಕೆ ಸಮರ್ಪಿಸಿದರು. ಮಹಾಕಾಲ್ ದೇವಸ್ಥಾನದಲ್ಲಿ ಪೂಜೆ ನಡೆಸಿ ಆರತಿಯನ್ನು ಬೆಳಗಿದರು. ಉದ್ಘಾಟನಾ ಸಮಾರಂಭದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಉಜ್ಜಯಿನಿಯು ಸಾವಿರಾರು ವರ್ಷಗಳಿಂದ ಭಾರತದ ಸಂಪತ್ತು ಮತ್ತು ಸಮೃದ್ಧಿ, ಜ್ಞಾನ ಮತ್ತು ಘನತೆ, ನಾಗರಿಕತೆ ಮತ್ತು ಸಾಹಿತ್ಯವನ್ನು ಮುನ್ನಡೆಸಿದೆ. ಉಜ್ಜಯಿನಿಯ ಪ್ರತಿಯೊಂದು ಕಣವೂ ಆಧ್ಯಾತ್ಮಿಕತೆಯಲ್ಲಿ ಮುಳುಗಿದೆ ಮತ್ತು ಅದು ಪ್ರತಿ ಮೂಲೆ ಮೂಲೆಯಲ್ಲಿಯೂ ಅಲೌಕಿಕ […]
ಅಪ್ಪು ಗಂಧದಗುಡಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ

ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. ‘ಗಂಧದ ಗುಡಿ’ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಗಂಧದ ಗುಡಿ ಚಿತ್ರ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟಿಸಿದ್ದರು. ನಮಸ್ತೆ ನರೇಂದ್ರ ಮೋದಿ ಅವರೇ, ಅಪ್ಪು ಅವರ […]
ಬ್ರಹ್ಮಾವರ: ಬಿಜೆಪಿ ಗ್ರಾಮಾಂತರ ವತಿಯಿಂದ ಖಾದಿ ಮೇಳ

ಬ್ರಹ್ಮಾವರ: ಬಿಜೆಪಿಯ ಸೇವಾ ಪಾಕ್ಷಿಕ ಅಭಿಯಾನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚಣೆ ಅಂಗವಾಗಿ ಬಿಜೆಪಿ ಉಡುಪಿ ಗ್ರಾಮಾಂತರ ವತಿಯಿಂದ ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಆಯೋಜಿಸಿದ್ದ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಖಾದಿ ಮೇಳವನ್ನು ಬಿಜೆಪಿ ಉಡುಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷೆ ವೀಣಾ ವಿ. ನಾಯ್ಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸದಾನಂದ ಉಪ್ಪಿನಕುದ್ರು, ಬಿಜೆಪಿ ಜಿಲ್ಲಾ […]