ಕ್ರೈಸ್ತ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ: ಪ್ರಧಾನಿ ಆಹ್ವಾನಕ್ಕೆ ಪೋಪ್ ಸಮ್ಮತಿ

ವ್ಯಾಟಿಕನ್ ಸಿಟಿ: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು  ಕ್ರೈಸ್ತ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತಕ್ಕೆ ಭೇಟಿ ನೀಡುವಂತೆ ಪೋಪ್‌ ಅವರನ್ನು ಪ್ರಧಾನಿ ಆಮಂತ್ರಿಸಿದರು. ಮೋದಿ ಆಹ್ವಾನವನ್ನು ಪೋಪ್ ಒಪ್ಪಿಕೊಂಡಿದ್ದು, ಅವರು ಭಾರತಕ್ಕೆ ಭೇಟಿ ನೀಡುವುದು ಖಚಿತಪಟ್ಟಿದೆ. 1999ರಲ್ಲಿ ಪೋಪ್ ಜಾನ್ ಪಾಲ್ 2 ಅವರು ಭಾರತಕ್ಕೆ ಬಂದಿದ್ದು, ಅಧಿಕೃತವಾಗಿ ಕೊನೆಯ ಭೇಟಿಯಾಗಿತ್ತು. ಪೋಪ್ ಫ್ರಾನ್ಸಿಸ್ ಅವರೊಂದಿಗೆ ಅತ್ಯಂತ ಆತ್ಮೀಯ ಸಂವಾದ ನಡೆಸಿದ್ದೇನೆ. ಅವರೊಂದಿಗೆ ವ್ಯಾಪಕ ವಿಷಯಗಳ […]