ಕಾರ್ಕಳ: 14 ನೇ ಶತಮಾನದ ಕನ್ನಡ ಶಾಸನ ಪತ್ತೆ
ಕಾರ್ಕಳ: ಇಲ್ಲಿನ ಅಜೆಕಾರಿನ ಗಾಣದಬೆಟ್ಟು ಎಂಬಲ್ಲಿ ಸಂಶೋಧಕರ ತಂಡಕ್ಕೆ 14 ನೇ ಶತಮಾನದ ಕನ್ನಡ ಶಾಸನವೊಂದು ದೊರೆತಿದೆ. ಉಡುಪಿಯ ಓರಿಯಂಟಲ್ ಆರ್ಕೈವ್ಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್.ಎ ಕೃಷ್ಣಯ್ಯ, ಯು ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಉಪಾಧ್ಯಾಯ ಕೆ ಶ್ರೀಧರ್ ಭಟ್ ಮತ್ತು ಹೈದರಾಬಾದಿನ ಪ್ಲೀಚ್ ಇಂಡಿಯಾ ಫೌಂಡೇಶನ್ನಿನ ಶೃತೇಶ್ ಆಚಾರ್ಯ ತಂಡವು ಅಮ್ಮು ಶೆಟ್ಟಿ ಎನ್ನುವವರಿಗೆ ಸಂಬಂಧಪಟ್ಟ ಜಾಗದಲ್ಲಿ ಈ ಶಾಸನವನ್ನು ಪತ್ತೆ ಮಾಡಿದೆ. ಮೂರು ಫೀಟ್ ಉದ್ದ ಎರಡು ಫೀಟ್ ಅಗಲದ ಗ್ರಾನೈಟ್ ಶಿಲೆಯ ಶಾಸನವನ್ನು […]