ಪಿಲಿಕುಳ: ಪ್ರವಾಸಿಗರ ಅಚ್ಚುಮೆಚ್ಚಿನ ಲಂಗೂರ್ “ರಾಜು” ಇನ್ನಿಲ್ಲ

ಪಿಲಿಕುಳ ಜೈವಿಕ ಉದ್ಯಾನವನದ 21 ವರ್ಷ ಪ್ರಾಯದ ಹನುಮಾನ್ ಲಂಗೂರ್ “ರಾಜು” ಮಂಗಳವಾರ ಮೃತಪಟ್ಟಿದೆ. ಪಿಲಿಕುಳ ಮೃಗಾಲಯದ ಪ್ರಾರಂಭ ದಿನಗಳಲ್ಲಿ ರಾಜುವನ್ನು ಪಡುಬಿದ್ರೆಯ ಬಾರ್ ಒಂದರಿಂದ ರಕ್ಷಿಸಲಾಗಿತ್ತು. ಮಾಲಕ ಮತ್ತು ಗಿರಾಕಿಗಳಿಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದು “ರಾಜು” ಮದ್ಯಪಾನದ ಚಟ ಅಂಟಿಸಿಕೊಂಡು ಅನಾರೋಗ್ಯಕ್ಕೆ ಈಡಾಗಿತ್ತು. ಆದರೆ ಪಿಲಿಕುಳ ಮೃಗಾಲಯದಲ್ಲಿ ನಿಧಾನವಾಗಿ ಅಮಲು ಸೇವನೆಯ ಅಭ್ಯಾಸವನ್ನು ಬಿಡಿಸಿ ವಿವಿದ ಜಾತಿಯ ಹಣ್ಣು ಹಂಪಲುಗಳನ್ನು ಸೇವಿಸಲು ಒಗ್ಗಿಕೊಂಡಿತ್ತು ಮತ್ತು ಮೃಗಾಲಯದ ಸಂದರ್ಷಕರಿಗೆ ಬಹಳ ಆಕರ್ಷಕವಾಗಿ ಪ್ರೀತಿಪಾತ್ರವಾಗಿತ್ತು. ಲಂಗೂರ್ ನೇಪಾಳ, ಶ್ರೀಲಂಕಾ. […]