ಕಾಸರಗೋಡು: ಆಫ್ರಿಕನ್ ಹಂದಿ ಜ್ವರ ದೃಢ; 500ಕ್ಕೂ ಹೆಚ್ಚು ಹಂದಿಗಳ ಹತ್ಯೆಗೆ ಇಲಾಖೆ ಸಜ್ಜು
ಕಾಸರಗೋಡು: ಕಾಸರಗೋಡಿನ ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟುಕುಕ್ಕೆ ಖಾಸಗಿ ಜಮೀನಿನಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ 500ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲು ಪಶುಸಂಗೋಪನಾ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡ (ಆರ್‌ಆರ್‌ಟಿ) ಸಜ್ಜಾಗಿದೆ. ಜನವರಿ 4ರಂದು ಹಲವು ಹಂದಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಂಡವು ಜಮೀನಿಗೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿತ್ತು. ಮಾದರಿಗಳನ್ನು ಭೋಪಾಲ್‌ನ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಅಲ್ಲಿ ರೋಗ ದೃಢಪಟ್ಟಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶುವೈದ್ಯ ಅಲ್ವಿನ್ ವ್ಯಾಸ್ ಮತ್ತು […]