ರಾಜ್ಯದಾದ್ಯಂತ ಇಂದಿನಿಂದ 6ರಿಂದ 8ರವರೆಗಿನ ಭೌತಿಕ ತರಗತಿ ಆರಂಭ

ಬೆಂಗಳೂರು: ರಾಜ್ಯದಾದ್ಯಂತ ಶಾಲೆಗಳಲ್ಲಿ 6ರಿಂದ 8ರವರೆಗಿನ ಭೌತಿಕ ತರಗತಿ ಇಂದಿನಿಂದ (ಸೆ. 6) ಆರಂಭಗೊಂಡಿದೆ‌. ಕೋವಿಡ್‌ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಂಡು, ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಪಾಲಿಸಿ ತರಗತಿಗಳನ್ನು ಆರಂಭಿಸುವಂತೆ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ.