ಕರ್ತವ್ಯ ಪ್ರಜ್ಞೆಗೊಂದು ಅಪೂರ್ವ ನಿದರ್ಶನ: ಸ್ವಚ್ಛ ವಾಹಿನಿ ವಾಹನವನ್ನು ಖುದ್ದು ಚಲಾಯಿಸುವ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮಾಡುವ ಸ್ವಚ್ಛ ವಾಹಿನಿ ವಾಹನವನ್ನು ಖುದ್ದು ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಸಾ ಚಲಾಯಿಸಿ ಕರ್ತವ್ಯ ಪ್ರಜ್ಞೆಗೊಂದು ಉದಾಹರಣೆಯಾಗಿದ್ದಾರೆ. ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ತನ್ನ ಕರ್ತವ್ಯದ ಜೊತೆಗೆ ವಾಹನ ಚಾಲನೆಯ ಹೊಸ ಕೆಲಸವನ್ನು ಮೇ ಮೊದಲನೆ ವಾರದಿಂದ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ನಫೀಸಾ, ”ಮನೆಯಲ್ಲಿ ವಾಹನಗಳನ್ನು ಓಡಿಸುವ ನೈಪುಣ್ಯತೆ ಇರುವುದು ನನಗೆ […]